ಬೆಂಡೆ (ಅಬೆಲ್‍ಮಾಸ್ಕಸ್ ಎಸ್ಕ್ಯುಲೆಂಟಸ್ ಮಾಂಕ್) ಮ್ಯಾಲೊ ಕುಟುಂಬದಲ್ಲಿನ ಒಂದು ಹೂ ಬಿಡುವ ಸಸ್ಯ. ಅದನ್ನು ಅದರ ತಿನ್ನಬಹುದಾದ ಹಸಿರು ಬೀಜ ಕೋಶಗಳಿಗಾಗಿ ಮಹತ್ವ ಕೊಡಲಾಗುತ್ತದೆ. . ಬೆಂಡೆಯ ಭೌಗೋಳಿಕ ಮೂಲ ವಿವಾದಾತ್ಮಕವಾಗಿದೆ, ದಕ್ಷಿಣ ಏಷ್ಯಾ, ಈಥಿಯೋಪಿಯಾ ಮತ್ತು ಪಶ್ಚಿಮ ಆಫ್ರಿಕಾ ಮೂಲಗಳದ್ದೆನ್ನುವ ಬೆಂಬಲಿಗರಿದ್ದಾರೆ. === ಭಾರತೀಯ ಭಾಷೆಗಳಲ್ಲಿ ಬೆಂಡೆ ಹೆಸರು === ಹಿಂದಿ,ಪಂಜಾಬ=ಭಿಂಡಿ() ಗುಜರಾತ=ಬಿಂಡ() ಬಂಗಾಲ=ಧೆನ್ ರೋಷ್() ತಮಿಳು=ಬೆಂಡಿಕಾಯಿ() ತೆಲುಗುಬೆಂಡಿಕಾಯಿ() ಒರಿಯ=ವೆಂಡಿ() ಮಲಯಾಳಂ=ವೆಂಡ() ಅಸ್ಸಾಂ,ಮರಾಠಿ=ಭೇಂಡಿ() === ಬೆಂಡೆಗಿಡ-ಬೀಜ === ಇದು ವಾರ್ಷಿಕ ಸಸ್ಯ.೦೯-೨.೦ಮೀಟರುಗಳ ಎತ್ತರ ಬೆಳೆಯುತ್ತದೆ. ಕೊಂಬೆಗಳಿವೆ. ಪತ್ರ/ಎಲೆಗಳು ಹಸ್ತಾಕಾರದಲ್ಲಿದ್ದು, ಹಲ್ಲೆಗಳನ್ನು ಹೊಂದಿದೆ .ಎಲೆಗಳು ಹಸಿರು ಬಣ್ಣದಲ್ಲಿರುತ್ತವೆ, ಪತ್ರಗಳ ಮೇಲೆ, ಕಾಂಡದ ಮೇಲೆ, ಕಾಯಿ ಮೇಲೆ ಕೇಶಗಳು ಇರುತ್ತವೆ. ಎಳೆಯ ಕಾಯಿಗಳನ್ನು ಮಾತ್ರ ಅಡಿಗೆ ಮಾಡುವುದರಲ್ಲಿ ಉಪಯೋಗಿಸುತ್ತಾರೆ. ಹೂವುಗಳು ಹಳದಿಬಣ್ಣ (ಮಂಜಾಗಿ) ಹೊಂದಿರುತ್ತವೆ. ಬೆಂಡೆಕಾಯಿ ೧೦-೨೫ ಸೆಂ. ಮೀ (೪-೧೦ ಅಂಗುಲ)ಉದ್ದವಾಗಿರುತ್ತವೆ. ಕಾಯಿ ಮೇಲೆ ಕೇಶದಂತನುನುಪಾದ ಪದಾರ್ಥೈಗಳಿರುತ್ತದೆ(ಕೆಲವು ಪ್ರಭೇದಗಳ ಕಾಯಿ ಚಿಕ್ಕದಾಗಿರುತ್ತದೆ). ಕಾಯಿಯ ಕೆಳಗಿನ ಭಾಗ ದಪ್ಪಗಿದ್ದು ಕಡೆಯಲ್ಲಿ ಕಿರಿದಾಗುತ್ತಾ ಹೋಗುತ್ತದೆ. ಕಾಯಿಯ ಒಳಗೆ ಅಂಡಾಕಾರದಲ್ಲಿ, ಕೋಚುಗಿದ್ದ ಕಪ್ಪುವರ್ಣದ ಬೀಜಗಳಿರುತ್ತವೆ. ಕೆಲವು ದೇಶಗಳಲ್ಲಿ ಇದರ ಬೀಜವನ್ನು ಕಾಫಿಯಲ್ಲಿ ಬಳಸುತ್ತಾರೆ. ಒಣಗಿಸಿದ ಬೀಜದಲ್ಲಿ ೧೬-೧೭% ಎಣ್ಣೆ, ೧೮-೧೯% ಪ್ರೋಟೀನ್,೨೧% ನಾರು () ಪದಾರ್ಥಗಳಿರುತ್ತವೆ. ಬೆಂಡೆ ಬೀಜದಲ್ಲಿ ಎಣ್ಣೆ ಇದ್ದುದನ್ನು ೧೯೨೦ರಲ್ಲಿ ಜಮೈಸನ್()ಮತ್ತು ಬಾಗ್ ಮಾನ್()ಕಂಡು ಹಿಡಿದಿದ್ದಾರೆ. === ಎಣ್ಣೆ ತೆಗೆಯುವ ವಿಧಾನ === ಬೆಂಡೆ ಬೀಜದಲ್ಲಿ ೨೦% ಪ್ರತಿ ಶತಕ್ಕಿಂತ ಎಣ್ಣೆ ಕಡಿಮೆ ಇರುವುದರಿಂದ, ಎಕ್ಸುಪೆಲ್ಲರು ಎಣ್ಣೆ ಯಂತ್ರಗಳಿಂದ ಎಣ್ಣೆಯನ್ನು ತೆಗೆಯುವುದಕ್ಕೆ ಆಗುವದಿಲ್ಲ. ಬೆಂಡೆ ಬೀಜಗಳಿಂದ ಸಾಲ್ವೆಂಟ್ ಎಕ್ಸುಟ್ರಾಕ್ಷನು ಪ್ಲಾಂಟ್ ಸಹಾಯದಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಎಣ್ಣೆ ಅರಿಸಿನ ಮತ್ತು ಹಸುರು ವರ್ಣಗಳ ಮೇಳವಾಗಿ ಕಾಣಿಸುತ್ತದೆ .ಎಣ್ಣೆಯಲ್ಲಿರುವ ಫೆನೋಫೈಟಿನ್() ಎಣ್ಣೆಗೆ ಹಸಿರು ಬಣ್ಣ ಇರುವುದಕ್ಕೆ ಕಾರಣವಾಗಿದೆ. ಎಣ್ಣೆ ಆಲ್ಫಾ,ಗಾಮಾ ಟೊಕೋಫೆರೊಲುಗಳನು ಹೊಂದಿರುತ್ತದೆ. === ಬೆಂಡೆ ಎಣ್ಣೆ ಲಕ್ಷಣಗಳು === ಎಣ್ಣೆ ಗುಣ,ಲಕ್ಷಣಗಳ ಪಟ್ಟಿ ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು === ಎಣ್ಣೆ ಉಪಯುಕ್ತತತೆಗಳು === ಪ್ರಸ್ತುತದಲ್ಲಿ ಈ ಎಣ್ಣೆ ಉತ್ಪತ್ತಿ ಪ್ರಾಥಮಿಕ ಸ್ಥಾನದಲ್ಲಿದೆ. ಇನ್ನೂ ಭಾರಿ ಪ್ರಮಾಣದಲ್ಲಿ ಉತ್ಪನ್ನ ಮಾಡುವ ಪ್ರಯತ್ನಗಳು ನಡೆಯುತ್ತಾ ಇವೆ.. ಬೆಂಡೆ ಬೀಜ ಎಣ್ಣೆಯನ್ನು ಜೈವಿಕ ಇಂಧನವಾಗಿ ಪರಿವರ್ತನೆ ಮಾಡಿ, ವಾಹನಗಳಲ್ಲಿ ಉಪಯೋಗಿಸಬಹುದು. ಎಣ್ಣೆಯನ್ನು ರಿಫೈಂಡ್ ಮಾಡಿದ ಮೇಲೆ ಅಡುಗೆ ಎಣ್ಣೆಯಾಗಿ ಬಳಸಬಹುದು. === ಉಲ್ಲೇಖನ ===